`ಭುಜಂಗ` ಜುಲೈ 15 ಬಿಡುಗಡೆ
Posted date: 07 Thu, Jul 2016 – 10:09:02 AM

ಬಹು ನಿರೀಕ್ಷಿತ ಚಿತ್ರ ಭುಜಂಗ’ ಸೆನ್ಸಾರ್ ಮಂಡಳಿ ಇಂದ ಯು/ ಎ ಅರ್ಹತಾ ಪತ್ರ ಪಡೆದು ಚಿತ್ರದ ಬಿಡುಗಡೆಯನ್ನು ನಿರ್ಮಾಪಕ ವರುಣ ಮಹೇಶ್ ಅವರು ಜುಲೈ 15 ಎಂದುನಿರ್ಧರಿಸಿದ್ದಾರೆ. ಜೀವ ಅವರ ನಿರ್ದೇಶನದ ಮೊದಲ ಪ್ರಯತ್ನ ಇದು.

ಪ್ರಜ್ವಲ್ ದೇವರಾಜ್ ಹಾಗೂ ಮೇಘನ ರಾಜ್ ಮುಖ್ಯ ತಾರಾಗಣದ ಭುಜಂಗ’ ಚಿತ್ರದಲ್ಲಿ ಐಶ್ವರ್ಯ ಸಿಂದೋಗಿ ಒಂದು ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಭುಜಂಗ’ ಸಿನಿಮಾದಲ್ಲಿ ಹಾಸ್ಯ,ಭಾವನೆಗಳ ಮೆರೆದಾಟ ಇದ್ದರೂ ಮಧ್ಯಂತರದ ನಂತರ ಪ್ರೇಕ್ಷಕನನ್ನು ಹಿಡಿದು ಕೂಡಿಸುವುದು ಸಾಹಸಗಳ ಸೆರೆಮಾಲೆ. ಮೂರು ವಿವಿದ ರೀತಿಯ ಸಾಹಸ ಜೊತೆಗೆ ಮೂರು ಸಣ್ಣ ಸಾಹಸಗಳನ್ನು ಸಹ ಮಾಸ್ ಮಾಧ ಸಹಾಸ ಮಾಡಿಸಿದ್ದಾರೆ.

ತಲಕಾಡುಮೈಸೂರುಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿರುವ ಭುಜಂಗ’ ಚಿತ್ರದ ನಾಯಕ ಪ್ರಜ್ವಲ್ ದೇವರಾಜ್ ಈ ಚಿತ್ರಕ್ಕೆ ಹಲವಾರು ಬಗೆಯ ಸ್ಟಂಟ್ಸ್ ಮಾಸ್ ಮಾಧ ಸಾಹಸ ನಿರ್ದೇಶನದಲ್ಲಿ ಮಾಡಿದ್ದಾರೆ.

ಸಂತೋಷ್ಸಾಧು ಕೋಕಿಲಜೈ ಜಗದೀಶ್ಬುಲ್ಲೆಟ್ ಪ್ರಕಾಶ್ತಬಲಾ ನಾಣಿಕಲ್ಯಾಣಿಭಜರಂಗಿ ಚೇತನ್ಕರಿ ಸುಬ್ಬು ಹಾಗೂ ಇತರರು ಪೋಷಕ ಕಲಾವಿದರು ಇರುವ ಈ ಚಿತ್ರಕ್ಕೆ ಐದು ಹಾಡುಗಳನ್ನು ಪೂರ್ಣಚಂದ್ರ ತೇಜಸ್ವಿ ಅವರು ಸಂಯೋಜನೆ ಮಾಡಿದ್ದಾರೆ. ಗುಂಡಲ್ಪೇಟ್ ಸುರೇಶ್ ಅವರ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಬಿ ಎ ಮಧು ಅವರ ಕಥೆ,ಚಿತ್ರಕಥೆ ಹಾಗೂ ಸಂಭಾಷಣೆ ಇದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed